ಚಂದ ಮಾಮಾ ಓಡಿ ಬಾ
ಚಂದದಿಂದ ಆಡು ಬಾ
ಬಂದು ಒಡನಾಡು ಬಾ
ಮುಂದೆ ಮುಂದೆ ಓಡಿ ಬಾ
ಸಕ್ಕರೆ ಕಡ್ಡಿ ತರ್ತೀನಿ
ಮಿಕ್ಕರೆ ನಿಂಗೂ ಕೊಡ್ತೀನಿ
ನಕ್ಕರೆ ನಾನು ನಗ್ತೀನಿ
ಅತ್ತರೆ ನಾನು ಅಳ್ತಿನಿ
ಎಲ್ಲಿಗೆ ಹೋದರು ಬರ್ತೀಯಾ
ಅಲ್ಲೇ ದೂರದಲಿ ಇರ್ತೀಯಾ
ಮೆಲ್ಲಗೆ ಸಣ್ಣಗೆ ಆಗ್ತೀಯಾ
ಹಿಂದೆ ಮುಂದೆ ಹೋಗ್ತೀಯ
ಚಂದ ಮಾಮಾ ಓಡಿ ಬಾ
ಚಂದದಿಂದ ಆಡು ಬಾ