ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು
ಎತೀಕೊಳ್ಳದೆ ಹೋದರದಕೆ ಕೋಪಬರುವುದು
ಕೊಪಬರಲು ಗಟ್ಟಿಯಾಗಿ ಕಿರುಚಿ ಕೊಳ್ಳುವುದು
ಕಿರುಚಿ ಕೊಂಡು ತನ್ನ ಮೈ ಪರಚಿಕೊಳ್ಳುವುದು
ಮೈಯ್ಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನು ಅತ್ತು ಬಿಡುವಳು
ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು